2024-08-31 16:11
ಬಿಟ್ಟ ಪದಗಳನ್ನು ತುಂಬಿರಿ
ಹೊಂದಿಸಿ ಬರೆಯಿರಿ
ಗುಂಪಿಗೆ ಸೇರದ ಪದಗಳನ್ನು ಗುರುತಿಸಿ...
ನೆನಪಿದೆಯಾ, ಶಾಲಾ ಪರೀಕ್ಷಾ ಸಮಯದಲ್ಲಿ ಕೊಡುತ್ತಿದ್ದ ಪ್ರಶ್ನಾ ಮಾದರಿ. ಹೆಚ್ಚೇನೂ ಬದಲಾಗಿಲ್ಲ ಈಗಲೂ ಅದೇ ರೀತಿ ಜೀವನವೆಂಬ ಪರೀಕ್ಷೆಯ ಮಾದರಿ. ಕಷ್ಟ ನೋವು ಎಂದಾಗ ಖಾಲಿ ಇರುವ ಜಾಗದಲ್ಲಿ ಸಮಾಧಾನ ಭರವಸೆಗಳಿಂದ ತುಂಬಬೇಕು. ಬದುಕಿನ ಕಥನವನ್ನು ತಾಳ್ಮೆ, ಸಮಚಿತ್ತದಿಂದ ಹೊಂದಿಸಿ ಬರೆಯಬೇಕು. ನಮ್ಮಲ್ಲೇ ಇರುವ ಅಜ್ಞಾನ, ಅಸೂಯೆ, ಮತ್ಸರ, ದ್ವೇಷ, ಅಹಂಕಾರವನ್ನು ನಾವೇ ಗುರುತಿಸಿ ಬೇರ್ಪಡಿಸಬೇಕು. ಬಿಟ್ಟ ಸ್ಥಳ, ಹೊಂದಿಸಿ ಬರೆಯುವಲ್ಲಿ ಖಂಡಿತಾ ತಪ್ಪು ಮಾಡಬೇಡಿ ಎಂದು ಶಿಕ್ಷಕರು ಹೇಳುತ್ತಿದ್ದುದು ಯಾಕೇ ಅಂತ ಈಗ ಗೊತ್ತಾಯ್ತಾ?